Kirik Keerthi Namma Bengaluru Ft. Chandan Shetty | ಕಿರಿಕ್ ಕೀರ್ತಿ ನಮ್ಮ ಬೆಂಗಳೂರು, ಜೊತೆಗೆ ಚಂದನ್ ಶೆಟ್ಟಿ

2249
Published on February 11, 2018 by admin

Lyrics-Singer | Kirik Keerthi Music | Chandan Shetty DOP-Editing | Vikram Yoganand ( Smart Screen Productions) ಬೆಂಗಳೂರು…ಸ್ವರ್ಗ ಬೆಂಗಳೂರು ನಿಂಗೆ ಇಷ್ಟ ಇಲ್ವಾ ಬಿಟ್ಟು ಹೊಯ್ತಾ ಇರು… ಬೆಂಗಳೂರು…ಸ್ವರ್ಗ ಬೆಂಗಳೂರು ನಿಂಗೆ ಇಷ್ಟ ಇಲ್ವಾ ಬಿಟ್ಟು ಹೊಯ್ತಾ ಇರು… ಎಲ್ಲೆಲ್ಲಿಂದ ಬಂದೋರ್ಗೆಲ್ಲಾ ಕರ್ದು ಕರ್ದು ಕೆಲ್ಸ ಕೊಟ್ಟು ಕೈ ತುಂಬ ಸಂಬಳ, ಕನ್ನಡದೋರ ಬೆಂಬಲ ಎಲ್ಲ ಇದ್ರು ಗಾಂಚಾಲಿ ಮಾಡ್ಕೊಂಡು ಹೇಳ್ತಾರೆ ಕನ್ನಡ ನಂಗೊತ್ತಿಲ್ಲ…ಕನ್ನಡ ನಂಗೊತ್ತಿಲ್ಲ… ಬೆಂಗಳೂರು…ಸ್ವರ್ಗ ಬೆಂಗಳೂರು ನಿಂಗೆ ಇಷ್ಟ ಇಲ್ವಾ ಬಿಟ್ಟು ಹೊಯ್ತಾ ಇರು… ಆ ಕಡೆ ಡೆಲ್ಲಿ ಈ ಕಡೆ ಮುಂಬೈ ಪಕ್ಕದಲ್ ಆಂಧ್ರ ಸೈಡಲ್ ಚೆನ್ನೈ ಎಲ್ಲ ಇದ್ರು ಬೆಂಗಳೂರ್ ಅಂದ್ರೆ ಯಾಕ್ರೋ ಸಾಯ್ತೀರಾ..? ಬೆಂಗಳೂರ್ ಅಂದ್ರೆ ಸ್ವರ್ಗ ಕಣ್ರೋ… ಬೆಂಗಳೂರ್ ಬಗ್ಗೆ ಬಾಯಿಗ್ ಬಂದಂಗ್ ಮಾತಾಡಿ ಯಾಕ್ರೋ ನಮ್ *** ಉರುಸ್ತೀರ..? ಬೆಂಗಳೂರು…ಸ್ವರ್ಗ ಬೆಂಗಳೂರು ನಿಂಗೆ ಇಷ್ಟ ಇಲ್ವಾ ಬಿಟ್ಟು ಹೊಯ್ತಾ ಇರು… ಅಣ್ಣ ತಮ್ಮ ಅನ್ನೋದ್ ಬಿಟ್ಟು ಭಯ್ಯ ಬ್ರದರ್ ಅಂತೀರಾ… ಬರದೇ ಇರೋ ಇಂಗ್ಲೀಷು, ಅರ್ಧಬಂರ್ಧ ಬಕ್ವಾಸು… ಇಲ್ದೇ ಇರೋ ಶೋಕಿ ಮಾಡ್ಕೊಂಡ್ ಗಾಂಚಾಲೀಲಿ ಹೇಳ್ತೀರ… ಕನ್ನಡ ನಂಗ್ ಬರಲ್ಲ… ಕನ್ನಡ ನಾನ್ ಕಲಿಯಲ್ಲ…! ಎಲ್ಲಿಂದ್ ಬಂದ್ರಿ, ಯಾವಾಗ್ ಬಂದ್ರಿ… ಎಲ್ಲಾ ಬಿಟ್ಟು ಇಲ್ಯಾಕ್ ಬಂದ್ರಿ..? ಬಂದ್ ಮೇಲಾದ್ರೂ ಕನ್ನಡ ಕಲಿಯೋಕ್ ಯಾಕ್ರೋ ಅಳ್ತೀರಾ..? ಕನ್ನ ಇಲ್ಲಿನ್ ಜೀವ ಕಣ್ರೋ… ಕನ್ನಡದವ್ರ್ ನಿಮ್ಗೇನೂ ಕೇಳ್ಲಿಲ್ಲ ಅಂದ್ರೆ ಬೆಂಗಳೂರೇ ನಿಮ್ದು ಅಂದ್ ಬಿಡ್ತೀರ… ಬೆಂಗಳೂರು…ಸ್ವರ್ಗ ಬೆಂಗಳೂರು ನಿಂಗೆ ಇಷ್ಟ ಇಲ್ವಾ ಬಿಟ್ಟು ಹೊಯ್ತಾ ಇರು… ಫೇಸ್ಬುಕ್ಕಲ್ಲಿ ಬೆಂಗಳೂರ್ ಬಗ್ಗೆ ಯದ್ವಾತದ್ವಾ ಬಯ್ತೀರ… ಯಾಕೆ ಅಂತ ನಾವ್ ಕೇಳಿದ್ರೆ ನಾವು ರೇಸಿಸ್ಟ್ ಅಂತೀರ… ಇಲ್ಲಿನ ಅನ್ನ, ಇಲ್ಲಿನ ಗಾಳಿ ಇಲ್ಲಿನ್ ನೀರು, ಇಲ್ಲಿನ್ ಬೀರು ತಿನ್ಕೊಂಡ್ ಕುಡ್ಕೊಂಡ್ ಮಜಾ ಮಾಡ್ಕೊಂಡ್ ಬೆಂಗಳೂರ್ ಸರಿ ಇಲ್ಲ ಅಂತೀರಲ್ಲ.. ಹೊಟ್ಟೆಗ್ ಏನ್ರೋ ತಿಂತೀರಾ..? ಬೆಂಗಳೂರು…ಸ್ವರ್ಗ ಬೆಂಗಳೂರು ನಿಂಗೆ ಇಷ್ಟ ಇಲ್ವಾ ಬಿಟ್ಟು ಹೊಯ್ತಾ ಇರು… ನಮ್ಮ ಬೆಂಗಳೂರು… ಜೀವ ಬೆಂಗಳೂರು.. ನಿಂಗೆ ಕಷ್ಟ ಅಲ್ವಾ..? ತೆಪ್ಪಗ್ ಕಳುಚ್ಕೊತಾ ಇರು…!

Category

Add your comment